Monday, July 24, 2023

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ.

 

New Ration Card Application Karnataka 2023 - ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ.

How to Apply New Ration Card Application Karnataka 2023 - ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ. 

ನಮಸ್ಕಾರ ಸ್ನೇಹಿತರೆ, ಹೊಸ ರೇಷನ್ ಕಾರ್ಡ್ / ಹೊಸ ಪಡಿತರ ಚೀಟಿ ಅದು ಬಿ.ಪಿ.ಲ್ ರೇಷನ್ ಆಗಿರಬಹುದು, ಎ.ಪಿ.ಲ್ ರೇಷನ್ ಕಾರ್ಡ್ ಆಗಿರಬಹದು , ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ.. ? ಅಂಥ ಸಂಪೂರ್ಣ ಮಾಹಿತಿ ತಿಳಿಯೋಣ . ಅದರ ಜೊತೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು.? ಅಹ್ರತೆ ಏನು .? ಎಂದು ತಿಳಿಯೋಣ ಬನ್ನಿ. 

ಬಿಪಿಲ್ ಅಥವಾ ಎಪಿಲ್  ಅಥವಾ ಅ.ಅ.ವೈ ಪಡಿತರ ಚೀಟಿಗಳು ಬಹಳ ಮುಖ್ಯವಾಗಿದ್ದು . ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಲಾಭಗಳು ಬಹಳಷ್ಟು ಇದಾವೆ. ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿನ ಕೆಳಗೆ ಇರುವ ಕುಟುಂಬ ಗಳು ರೇಷನ್ ಕಾರ್ಡ್ ಹೊಂದಿದರೆ ಒಳ್ಳೆಯದು. ಮೊದಲನೇದಾಗಿ ಅವರಿಗೆ ಅನ್ನಭಾಗ್ಯ ಯೋಜನೆಯಡಿ ತಿಂಗಳಿಗೆ ೧೦ಕೆಜಿ ಅಕ್ಕಿ ನೀಡಲಾಗುತ್ತದೆ.  ಹಾಗೆ ರೇಷನ್ ಕಾರ್ಡ್ ಕೂಡ ಒಂದು ವಿಳಾಸ ರೂಪದಲ್ಲಿ ಉಪಯೋಗಿಸಬಹುದು. 

*ರೇಷನ್ ಕಾರ್ಡ್ ನಲ್ಲಿ ವಿಧಗಳು : 

  • BPL Ration Card / PHH ( Below Poverty Line ) - ಬಿ.ಪಿ.ಲ್ ಪಡಿತರ ಚೀಟಿ. 
  • APL Ration Card / APL ( Above Poverty Line) - ಎ. ಪಿ.ಲ್  ಪಡಿತರ ಚೀಟಿ. 
  • AAY Ration Card / AAY ( Antodaya Anna Yojana) - ಅಂತೋದಯ ಅನ್ನ ಯೋಜನೆ. 

* ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

  • ಆಧಾರ್ ಕಾರ್ಡ್ ಪ್ರತಿ ( ಕಡ್ಡಾಯವಾಗಿ ಬೇಕಾಗಿರುವ ದಾಖಲಾತಿ )
  • ಆಧಾಯ ಮತ್ತು ಜಾತಿ ಪ್ರಮಾಣ ಪತ್ರ 
  • ಜನ ಪ್ರಮಾಣ ಪತ್ರ ( 6 ವರ್ಷ ಒಳಗಿನ ಮಕ್ಕಳು ಇದ್ದಾರೆ ಮಾತ್ರ )

* ಹೊಸ ರೇಷನ್ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

ಹಂತ 1 : ಆನ್ಲೈನ್ ನಲ್ಲಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಬಯಸುವವರು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತೆ . ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ ಸೈಟ್ ಅನ್ನು ಓಪನ್ ಮಾಡ್ಕೊಳ್ಳಿ. :>WEBSITE- Click Here




ಹಂತ 2 :  ನಂತರ ಅಲ್ಲಿ ಇ-ಸೇವೆಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ .  https://ahara.kar.nic.in/Home/EServices


ಹಂತ 3 : ನಂತರ ಇ ಪಡಿತರ ಚೀಟಿ ಅನ್ನುವ ಒಪ್ಶನ್ ಮೇಲೆ ಕ್ಲಿಕ್ ಮಾಡಿ . ಅಲ್ಲಿ  ಹೊಸ ಪಡಿತರ ಚೀಟಿ ಅಂಥ ಒಪ್ಶನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ .ಆಮೇಲೆ ಅಲಿ ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಓಪನ್ ಆಗುತ್ತೆ .  https://ahara.kar.nic.in/Home/EServices



ಹಂತ 3 : ನಂತರ ಕನ್ನಡ ಭಾಷೆಯನ್ನು ಸೆಲೆಕ್ಟ್ ಮಾಡಿ. ನಂತರ ಹೊಸ ರೇಷನ್ ಕಾರ್ಡ್ ಅನ್ನು ಸೆಲೆಕ್ಟ್ ಮಾಡ್ಕೊಳ್ಳಿ.  ನಂತರ BPL / APL  PHH NPHH  ಅದರಲ್ಲಿ ಯಾವುದೇ ಬೇಕು ಅದನ್ನ ಸೆಲೆಕ್ಟ್ ಮಾಡ್ಕೊಳ್ಳಿ. ಆಮೇಲೆ ಆಧಾರ್ ಕಾರ್ಡ್ ನಂಬರ್ ಹಾಕಿ . OTP ಹಾಕಿ 



ಹಂತ 4 : ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನುಂನೇರ್ ಗೆ ಒಟಿಪಿ ಬಂದಿರುತ್ತೆ ಅದು ಹಾಕಿ .ಆಮೇಲೆ ಬಯೊಮೀಟ್ರಿಕ್ ಕೊಡಿ. ADD ಮಾಡಿ 



ಹಂತ 5 : ಉಳಿದ ಸದಸ್ಯರು ADD ಮಾಡಿ ಆಮೇಲೆ ಫಿಂಗರ್ಪ್ರಿಂಟ್ ಕೊಟ್ಟು ADD ಮಾಡಿ. ನಂತರ ಫ್ಯಾಮಿಲಿ ಹೆಡ್ ಅನ್ನು ಸೆಲೆಕ್ಟ್ ಮಾಡಿ 

ಹಂತ 6 : ಎಲ್ಲಾ ಸದಸ್ಯರು ಸೇರಿಸಿದ ಮೇಲೆ ಕೊನೇಯದಾಗಿ ವಿಳಾಸವನ್ನು ನಮೂದಿಸಿ ಆಮೇಲೆ ಕೊನೆಯಲ್ಲಿ ಅರ್ಜಿಯನ್ನು ಸಲ್ಲಿಸಿ. 

ಹಂತ 7 : ಅರ್ಜಿ ಸಲ್ಲಿಸದ ಮೇಲೆ ಸ್ವೀಕೃತಿ ಬಂದಿರುತ್ತೆ ಅದರ ಮೂಲಕ ನಿಮ್ಮ ಹೊಸ ರೇಷನ್ ಕಾರ್ಡ್ ಅಪ್ರೂವಲ್ ಆಗಿದೇನ ಇಲ್ಲ ಅಂಥ ತಿಳ್ಕೊಬಹುದು . ಅದು ಹೇಗೆ ಅಂದ್ರೆ . ಕೆಳಗಿನ ತರ ಚೆಕ್ ಮಾಡ್ಕೊಳ್ಳಿ . 



ಹಂತ 8 : ನಿಮ್ಮ ಹತ್ತಿರುವ ಅಕ್ನೌಲ್ದಮೆಂಟ್ ನಂಬರ್ ಹಾಕಿ ಅದರ ಸ್ಥಿತಿ ತಿಳಿಯಿರಿ .. 



ಈ ಮಾಹಿತಿ ಓದಿದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು . ಈ ಮಾಹಿತಿ ಇಷ್ಟ ಆಗಿದ್ರೆ ತಪ್ಪದೆ ಶೇರ್ ಮಾಡಿ. 


***** ದನ್ಯವಾದಗಳು  *****

No comments:

Post a Comment

Avast Ransomware Decryption Tools 2023 Free Download

  Avast Ransomware Decryption Tools 2023 Free Download Avast Ransomware Decryption Tools 2023 Free Download. Full offline installer standalo...