Monday, July 24, 2023

ಗೃಹ ಲಕ್ಷ್ಮಿ ಯೋಜನೆಯ Rs.2000/- ಹಣ ಈ ಮಹಿಳೆಯರಿಗೆ ಬರುವುದಿಲ್ಲ ..! ತಕ್ಷಣ ಈ ಕೆಲಸ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ..!

 

ಗೃಹ ಲಕ್ಷ್ಮಿ ಯೋಜನೆಯ Rs.2000/- ಹಣ ಈ ಮಹಿಳೆಯರಿಗೆ ಬರುವುದಿಲ್ಲ ..! ತಕ್ಷಣ ಈ ಕೆಲಸ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ..!

ಗೃಹ ಲಕ್ಷ್ಮಿ ಯೋಜನೆಯ Rs.2000/- ಹಣ ಈ ಮಹಿಳೆಯರಿಗೆ ಬರುವುದಿಲ್ಲ ..! ತಕ್ಷಣ ಈ ಕೆಲಸ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ..!


ನಮಸ್ಕಾರ ಸ್ನೇಹಿತರೆ. ಅನ್ನಭಾಗ್ಯ ಯೋಜನೆಯಡಿ ರೇಷನ್ ಕಾರ್ಡ್ ಇದ್ದವರಿಗೆ Rs.170/- ಪ್ರತಿ ತಿಂಗಳು , ಮತ್ತ್ತು ಗೃಹ ಲಕ್ಷ್ಮಿ ಯೋಜನೆಯ Rs.2000/- ಪ್ರತಿ ತಿಂಗಳು ಹಣ ನೇರವಾಗಿ ಬ್ಯಾಂಕ್ ಖಾತೆಗೆ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಬೇಕಾಗಿದೆ. ಹಾಗಾದರೆ ಏನು ಮಾಡಬೇಕು ಅಂಥ ಮಾಹಿತಿಯನ್ನು ತಿಳಿಯೋಣ ಬನ್ನಿ. 

ಗೃಹ ಲಕ್ಷ್ಮಿ ಯೋಜನೆಯ Rs.2000/- & ಅನ್ನಭಾಗ್ಯ ಯೋಜನೆ Rs.170/- ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಬೇಕು. 

  • ಬ್ಯಾಂಕ್ ಅಕೌಂಟ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮತ್ತು NPCI Mapping ಆಗಿರಬೇಕು. 

ಸರ್ಕಾರದ ಯಾವುದೇ ಯೋಜನೆಗಳ ಸಹಾಯಧನ ಅಥವಾ ಲಾಭವನ್ನು ಪಡೆಯಬೇಕಾದರೆ ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿರಬೇಕಾಗುತ್ತದೆ . ಯಾಕಂದ್ರೆ ಸರ್ಕಾರದ ಹಣ ಡಿ ಬಿ ಟಿ ಮೂಲಕ ಜಮಾ ಮಾಡಲಾಗುತ್ತದೆ. 
ಡಿ ಬಿ ಟಿ ಅಂದರೆ ಡೈರೆಕ್ಟ್ ಬೆನೆಫಿಶಿಯರಿ ಟ್ರಾನ್ಸ್ಫ಼ಾರ್ ಎಂದರ್ಥ . ಇದರಿಂದಾಗಿ ಮಹಿಳೆಯರ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ  ಗೃಹ ಲಕ್ಷ್ಮಿ ಯೋಜನೆಯ Rs.2000/- ರೂಪಾಯಿ  ಮತ್ತು ಅನ್ನಭಾಗ್ಯ ಯೋಜನೆಯ Rs.170/- ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಹೀಗಾಗಿ ಅನ್ನಭಾಗ್ಯ ಯೋಜನೆಯ ಫಲಾನುಭವಿ ಮತ್ತು ಮನೆಯ ಯಜಮಾನಿ ಈ ಲಾಭವನ್ನು ಪಡೆಯಲು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ NPCI Mapping ಮಾಡಿಸಿಕೊಳ್ಳಬೇಕು . ಒಂದು ವೇಳೆ ಬ್ಯಾಂಕ್ ಖಾತೆ ತೆರೆಯುವಾಗ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೇನ ಇಲ್ಲ ಅಂಥ ತಿಳಿದುಕೊಳ್ಳಬಹುದು , ಅದು ಹೇಗೆ ಅಂದರೆ,

  • ನಿಮ್ಮ ಆಧಾರ್ ಕಾರ್ಡ್ ಹಾಗು ಬ್ಯಾಂಕ್ ಖಾತೆ ಲಿಂಕ್ ಆಗಿದೆನಾ ಎಂಬುದನ್ನು ಹೇಗೆ ನೋಡುವುದು ..?

ಹಂತ 1 : ಕೇಂದ್ರ ಸರ್ಕಾರದ ಆಧಾರ್ ಕಾರ್ಡ್ ಪೋರ್ಟಲ್ ಗೆ ಅಥವಾ ವೆಬ್ ಸೈಟ್ ಗೆ ಭೇಟಿ ನೀಡಬೇಕು.  ಈ ಲಿಂಕ್ ಮೇಲೆ ಕ್ಲಿಕ್ ಮಾಡಿ .  Aadhar Card NPCI Mapping Status Check


ಹಂತ 2 : ನಂತರ ಅಲ್ಲಿ ಕೇಳಲಾಗುವ ವಿವರಗಳನ್ನೂ ಕೊಡಬೇಕು, ನೆನಪಿರಲಿ. ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಒಟಿಪಿ ಹೋಗುತ್ತೆ  ಹೀಗಾಗೀ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಇರಬೇಕು.  ಈವಾಗ ಆಧಾರ್ ಕಾರ್ಡ್ ನಂಬರ್ ಹಾಕಿ ಆಮೇಲೆ ಅಲ್ಲಿ  ಕೇಳಲಾಗಿರುವ ಸೆಕ್ಯೂರಿಟಿ ಕೋಡ್ ಅನ್ನು ಹಾಕಿ. ಆಮೇಲೆ ಸೆಂಡ್ ಒಟಿಪಿ ಅನ್ನೋ ಬಟನ್ ಮೇಲೆ ಕ್ಲಿಕ್ ಮಾಡಿ. 


ಹಂತ 3 : ಈವಾಗ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಟಿಪಿ ಹೋಗುತ್ತೆ ,  ಒಮ್ಮೆ ಮೊಬೈಲ್ ಅನ್ನು ಚೆಕ್ ಮಾಡಿ , ಒಟಿಪಿ ಬಂದಿದ್ದರೇ . ಒಟಿಪಿ ಅನ್ನು ನಮೂದಿಸಿ. 


ಹಂತ 4 : ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒತಪ್ಪ್ ಅನ್ನು ನಮೂದಿಸಿ , ಆಮೇಲೆ ಅಲ್ಲಿ SUBMIT ಬಟನ್ ಮೇಲೆ ಕ್ಲಿಕ್ ಮಾಡಿ. 


ಹಂತ 5 : ಕೊನೆಯದಾಗಿ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ. ಹಾಗು ಆಕ್ಟಿವ್ ಜಾಲ್ತಿಯಲ್ಲಿ ಇದೇನಾ ಇಲ್ಲಾ ಅಂಥ ತೋರಿಸುತ್ತೆ. ಹಾಗೆ ಯಾವ ಬ್ಯಾಂಕ್ ಗೆ ಲಿಂಕ್ ಆಗಿದೆ ಅಂಥ ನೋಡಬಹುದು. 


ಹಂತ 6 : ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ಅಥವಾ INACTIVE ಅಂಥ ಇದ್ರೆ ಅದಕ್ಕೆ ನೀವು ನಿಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಶಾಖೆಗೆ ಹೋಗಿ ಲಿಂಕ್ ಮಾಡಿಸಿಕೊಳ್ಳಬೇಗುತ್ತದೆ.  ನಿಮ್ಮ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಬೇಕು . ಅವಾಗ ಲಿಂಕ್ ಮಾಡಿಸಿಕೊಳ್ಳಿ 


ಹಂತ 7 :  ಒಂದು ವೇಳೆ ನಿಮ್ಮ ಹತ್ತಿರ ಒಂದಕ್ಕಿಂತ ಹೆಚ್ಚಿನ ಬ್ಯಾಂಕ ಖಾತೆ ಹೊಂದಿದ್ದು , ನಿಮಗೆ ಇಷ್ಟ ಇರುವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಜೊತೆಗೆ NPCI Mapping ಮಾಡಿಸಿಕೊಳ್ಳಬೇಕು ಅಂದ್ರೆ , ಒಂದು ಅಪ್ಲಿಕೇಶನ್ ತೆಗೆದುಕೊಂಡು ಹೋಗಬೇಕು . ಅದನ್ನು ತುಂಭಿ ಅದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಕೊಟ್ಟು ಮಾಡಿಸಿಬೇಕು 


ಹೀಗೆ ನೀವು ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಅಥವಾ ಸೀಡೀಗ್ ಮಾಡಿಕೊಂಡರೆ ಮಾತ್ರ ನಿಮಗೆ ಗೃಹ ಲಕ್ಷ್ಮಿ ಯೋಜನೆಯ Rs.2000/- ಹಣ ಮತ್ತು ಅನ್ನಭಾಗ್ಯ ಯೋಜನೆಯ Rs.170/- ಹಣ ನೇರವಾಗಿ ಡಿ ಬಿ ಟಿ ಮೂಲಕ ಇಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ. 

ಈ ಮಾಹಿತಿ ನಿಮಗೆ ಇಷ್ಟ ಆಗಿದ್ರೆ ತಪ್ಪದೆ ನಿಮ್ಮ ಸ್ನೇಹಿತರಿಗೆ ಹಾಗು ಮಹಿಳಿಯರಿಗೆ ಶೇರ್ ಮಾಡಿ. 

***** ಧನ್ಯವಾದಗಳು *****

No comments:

Post a Comment

Avast Ransomware Decryption Tools 2023 Free Download

  Avast Ransomware Decryption Tools 2023 Free Download Avast Ransomware Decryption Tools 2023 Free Download. Full offline installer standalo...